ಡಾ.ಸುಬ್ರಹ್ಮಣ್ಯ ಸಿ ಕುಂದೂರು ಅವರು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸಮೀಪದ ಕುಂದೂರಿನವರು ಸಂಶೋಧನೆ, ಸಾಹಿತ್ಯ ಬರೆಹದ ಜೊತೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಿಯಾಶೀಲರು. ಆಳ್ವಾಸ್ ಕಾಲೇಜಿನಿಂದ ಪದವಿಯನ್ನು ಮತ್ತು ಕನ್ನಡ ವಿವಿ ಹಂಪಿಯಿಂದ ಕನ್ನಡ ಮತ್ತು ಚರಿತ್ರೆಯಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಡಾ ಅಮರೇಶ ನುಗಡೋಣಿ ಅವರ ಮಾರ್ಗದರ್ಶನದಲ್ಲಿ ವಸಾಹತುಶಾಹಿ ಕಾಲಘಟ್ಟದ ಕನ್ನಡ ಕಥಾಸಾಹಿತ್ಯದಲ್ಲಿ ಸ್ಥಳೀಯ ಪ್ರಜ್ಞೆಯ ತಾತ್ವಿಕ ಶೋಧ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಾದ ಎನ್ಇಟಿ,ಎಸ್ಎಲ್ಇಟಿಯಲ್ಲಿ ಅರ್ಹತೆಯನ್ನು ಪಡೆದಿರುವ ಇವರು ಪ್ರಸ್ತುತ ಮಂಗಳೂರಿನ ಬಿಜಿಎಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡನೆಯ ಜೊತೆಗೆ ಅನೇಕ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿದೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಚರ್ಚೆಯಲ್ಲಿ ಭಾಗಿಯಾಗಿದ್ದರಲ್ಲದೆ ರಾಜ್ಯದ ಬಹುಭಾಗದಲ್ಲಿ ಉಪನ್ಯಾಸ ನೀಡುವ ನೆಲೆಯಲ್ಲಿ ಸಕ್ರಿಯರು. ಪ್ರಾಮಾಣಿಕ ಶ್ರಮಜೀವಿಯಾಗಿ ಗುರುತಿಸಿಕೊಂಡಿರುವ ಇವರು ನಿಟ್ಟೆಯ ಸ್ವಯತ್ತ ವಿವಿಯ ಬಿಒಇ ಸದಸ್ಯರಾಗಿ, ಆಳ್ವಾಸ್ ಕಾಲೇಜಿನ ಬಿಒಎಸ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಚರ್ಚಾಸ್ಪರ್ಧೆಯಲ್ಲಿ ನಾಲ್ಕು ಭಾರಿ ರಾಜ್ಯ ಪ್ರಶಸ್ತಿ, ಭಾಷಣ ಸ್ಪರ್ಧೆಯಲ್ಲಿ ಎರಡು ಭಾರಿ ರಾಜ್ಯ ಪ್ರಶಸ್ತಿ, ಪ್ರಜಾವಾಣಿ ವಾರ್ಷಿಕ ಯುವ ಪ್ರಶಸ್ತಿ, ಲಿಲ್ಲಿರಾಮದಾಸ ಪ್ರಭು ಸಾಹಿತ್ಯ ಗೌರವ, ಕೊಪ್ಪ ತಾಲೂಕು ಕನ್ನಡ ರಾಜೋತ್ಸವ ಗೌರವ, ಜೆಸಿಐ ಮಲ್ನಾಡ್ ಗೌರವ, ಕರ್ನಾಟಕ ವ್ಯಂಗ್ಯಚಿತ್ರಕಲಾಮಾದ್ಯಮ ಚಿತ್ರಕಾವ್ಯ ಪ್ರಶಸ್ತಿ, ಅಪೂರ್ವಜ್ಞಾನ ರತ್ನ ಪ್ರಶಸ್ತಿ, ಕ್ರಿಯೆಟಿವ್ ಪುಸ್ತಕಮನೆ ಗೌರವ, ಶ್ರೀಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಸ್ವಾಮೀಜಿ ಅವರಿಂದ ಗೌರವ ಸನ್ಮಾನ, ಯುವಸಾಧಕ ಪ್ರಶಸ್ತಿ ಹೀಗೆ ಹತ್ತು ಹಲವು ಸಂಸ್ಥೆಗಳು ಇವರನ್ನು ಗೌರುತಿಸಿ ಗೌರವಿಸಿದೆ. ಪ್ರಕಟಿತ ಕೃತಿಗಳು : ಬಾನಂಗಳ, ಪಯಣ (ಕವನ ಸಂಕಲನ) ಮಲೆಯ ಮಾರುತ, ನೆಲದ ನಡಿಗೆ, ಜೀವನ ಯಾನ, ಮಾತು ನಿಂತಾಗ (ಕಾದಂಬರಿಗಳು) ಅನಿಕೇತನ, ಕದಿರು, ಸಿಂಚನಾ ( ಸಂಪಾದನ ಕೃತಿಗಳು) ಮಲೆನಾಡ ಸೃಜನಶೀಲ ಪ್ರತಿಭೆ ಹು.ವಾ ಶ್ರೀವತ್ಸ (ವ್ಯಕ್ತಿಚಿತ್ರಣ) ಜ್ಞಾನ (ಸ್ಮರಣ ಸಂಚಿಕೆ) ಅಕ್ಷರದ ಹಾದಿ ( ಬಾಲ್ಯದ ಅನುಭವ ಕಥನ) ಸ್ಥಳೀಯತೆ ( ವಿಮರ್ಶಾ ಲೇಖನ) ಕಥಾಸಾಹಿತ್ಯ : ದೇಶೀತನ (ಸಂಶೋಧನೆ) ಮುಕ್ತಮಂಗಳ (ಸಂ.ಮಂಗಳೂರು ವಿವಿ ಬಿಕಾಂ ಪಠ್ಯ ಇತ್ಯಾದಿ)